Thursday, March 24, 2011

ಸೀತಾ River Rafting ಹಾಗೂ ಕುಂದಾದ್ರಿ ಚಾರಣ. 
Sitaa River Rafting and Kundaadri Trekking.

ನಾವು ಪಶ್ಚಿಮ ಘಟ್ಟಗಳಲ್ಲಿ ಸುಮಾರು ಚಾರಣ ಮಾಡಿದ್ದೇವೆ. ನಮ್ಮ ಆಕಾಂಕ್ಷೆ river rafting ಮಾಡುವ ಆಸೆ. ಸೀತಾ ನದಿಯು ನನಗೆ ತುಂಬಾ ಅರಿತಿರುವ river rafting ಪ್ರದೇಶ. ಸೀತಾ ನದಿಯು ಆಗುಂಬೆಯಿಂದ ಸ್ವಲ್ಪ ದೂರದಲ್ಲಿ ಇದೆ. ಆಗುಂಬೆ ಸುತ್ತ ಮುತ್ತ ನಮಗೆ ಬೇಕಾದ ಚಾರಣದ ದಾರಿಗಳು ಇವೆ.
We have done many trekking in Western Ghats. Our desire is to go for river rafting. Sitaa river is the know river rafting place for me. Many trekking trails are also available near Agumbe.

ಯೋಜನೆ:
  • ಸೀತಾ River Rafting. ಒನಕೆ ಅಬ್ಬಿ  ಜಲಪಾತಕ್ಕೆ ಭೇಟಿ. 
  • ಆಗುಂಬೆಯಲ್ಲಿ ರಾತ್ರಿ ಕಳೆದು ಮಾರನೆಯ ದಿನ ಕುಂದಾದ್ರಿಯ ಚಾರಣ.
Plan:
· Sitaa river rafting. Visit to Onake Abbi water falls.
· Stay in Agumbe. Trekking Kundaadri.

ಮಾಹಿತಿ:
ಚಾರಣ ಪ್ರದೇಶ               : ಕುಂದಾದ್ರಿ, ಒನಕೆ ಅಬ್ಬಿ.
ತಲುಪುವ ಬಗೆ                 : ಬಸ್ಸಿನಲ್ಲಿ ಹೋಗುವುದು ಉತ್ತಮ.
ದಿನಗಳು                        : 2 ಹಗಲು ಹಾಗೂ 3 ರಾತ್ರಿ. 
ಉಳಿಯುವ ವ್ಯವಸ್ಥೆ          : Malya Residency 
ಆಹಾರ ವ್ಯವಸ್ಥೆ                : ಆಗುಂಬೆಯಲ್ಲಿ ಊಟ ಹಾಗೂ ಉಪಹಾರ ವ್ಯಸ್ಥೆ ಇದೆ.
ಹತ್ತಿರದ ವೀಕ್ಷಣಾ ಸ್ಥಳಗಳು : ನರಸಿಂಹ ಪರ್ವತ, ಜೋಗಿಗುಂಡಿ, ಬರ್ಖನ ಜಲಪಾತ ವೀಕ್ಷಣಾ ಸ್ಥಳ
                                       ಸೂರ್ಯಾಸ್ತ ವೀಕ್ಷಣ ಸ್ಥಳ.
ಸಂಪರ್ಕ ಸಂಖ್ಯೆ               :  ಸುಧೀಂದ್ರ ಮಲ್ಯ: +91 9448759363 .
ಚಾರಣದ ದೂರ                : ಕುಂದಾದ್ರಿ ಹೆಬ್ಬಾಗಿಲಿಂದ(Gate ) ಕುಂದಾದ್ರಿಗೆ 4 ಕಿ ಮೀ (ಒಟ್ಟು 8 ಕಿ ಮೀ).
                                       ಆಗುಂಬೆಯಿಂದ ಒನಕೆ ಅಬ್ಬಿ ಜಲಪಾತಕ್ಕೆ 4 ಕಿ ಮೀ (ಒಟ್ಟು 8 ಕಿ ಮೀ).
ಚಾರಣದ ಕಷ್ಟ ಸಾಧ್ಯ        : 2 /5 .
ಚಾರಣದ ಆಕರ್ಷಣೆ           : ಒನಕೆ ಅಬ್ಬಿ  ಜಲಪಾತ, ಕೂಡಲ ತೀರ್ಥ ಜಲಪಾತ, ಸದಾ ಹಸಿರಾಗಿರುವ ಕಾಡು, 
                                      ಆಗುಂಬೆಯ ಸೂರ್ಯಾಸ್ತ. 
ಸೂಕ್ತ ಸಮಯ                  : ಸೆಪ್ಟೆಂಬರ್ ಇಂದ ಜನವರಿ.
Information:
Trekking Place            : Kundaadri, Onake Abbi.
How to Reach              : Bus is best mode of Transport.
Number of Days          : 2 Days 3 Night.
Accommodation          : We stayed in a Lodge in Agumbe (Malya Residency).
Food                             : Many hotels available.
Nearby Places             : Narasimha Parvatha, Jogi Gundi, Barkhana view point.
                                        Sunset point.
Contact Numbers        : Sudhindra Malya - +91 9448759363
Trek Distance              : 4 km trekking to Kundaadri from Kundaadri gate(8km two way).
                                        4 km to Onake Abbi from Agumbe(8km two way).
Trek Difficulty Level     : 2 out of 5.
Trekking Attractions    : Onake Abbi falls, koodalateertha falls, Ever green forest.
Best Time to Trek        : Sept-Dec.

ನಾವು ತುಂಬಾ ಮುಂಚಿತವಾಗಿಯೇ ಸೀತಾ River Rafting ಹಾಗೂ ಕುಂದಾದ್ರಿ ಅಥವಾ ಕೊಡಚಾದ್ರಿ ಚಾರಣ ಮಾಡಲು ಯೋಜಿಸಿದ್ದೆವು.  ನಮ್ಮ ಚಾರಣ ದಿನ ಹತ್ತಿರವಾಗುತ್ತಿದ್ದಂತೆ ಪಶ್ಚಿಮ ಘಟ್ಟದಲ್ಲಿ ಮಳೆಯೂ ಹೆಚಾಗಿತ್ತು. ನೆರೆಹಾವಳಿಯ ಸ್ಥಿತಿ ಉಂಟಾಗಿತ್ತು. ಈ ಸ್ಥಿತಿ ನಮ್ಮ River Rafting ಗೆ ಅನಾನುಕೂಲ ಆಗಬಹುದು ಎಂದು ತಿಳಿದು, Rafting ನಡೆಸುವ ಆಯೋಜಕರಿಗೆ ಕರೆ ಮಾಡಿ ಕೇಳಿದಾಗ ಅವರು ನೀರು ಹೆಚ್ಚಾದಷ್ಟು  Rafting ಸುರಕ್ಷಿತವಾಗಿರುತ್ತದೆ ಎಂದರು. ಖುಷಿಯಿಂದ ನಾವು ಶಿವಮೊಗ್ಗಕ್ಕೆ ಹೊರಟೆವು. ಶಿವಮೊಗ್ಗ ತಲುಪುವ ವೇಳೆಗೆ ಸುಮಾರು ಬೆಳಗ್ಗೆ 4  ಘಂಟೆ ಆಗಿತ್ತು. ಸೋಮೇಶ್ವರ ಕಡೆಗೆ ಹೋಗುವ ಮತ್ತೊಂದು ಬಸ್ಸನ್ನು ಹಿಡಿದು ಹೊರೆಟೆವು. ಸೀತಾನದಿ ನಿಸರ್ಗಮ ನಮ್ಮ River Rafting ಶುರು ಮಾಡುವ ಜಾಗ. ಶಿವಮೊಗ್ಗದಿಂದ ಸೀತಾ ನದಿ ನಿಸರ್ಗಧಾಮದವರೆಗೂ ನಮ್ಮ ಪ್ರಶಾಂತ್ ಭಟ್ಟರು ಸುಖವಾಗಿ ಕೊನೆಯ ಸೀಟ್ ನಲ್ಲಿ ಒಂದು ಟಿಕೆಟ್ ಕೊಂಡು 4 ಸೀಟಿನಲ್ಲಿ ನಿದ್ರಿಸಿದರು. ಸೀತಾ ನದಿ ನಿಸರ್ಗಧಾಮವನ್ನು ಸುಮಾರು ಬೆಳಗ್ಗೆ 7 :೦೦ ಘಂಟೆಗೆ ತಲುಪಿದೆವು.
We had planned Sitaa river rafting and Kundaadri or Kodachaadri Trekking well in advance. It was raining heavily in agumbe and in Western Ghats. It was flood situation. I called up river rafting organizers whether heavy rain could stop us from River Rafting. He told, more the rain more safe for river rafting. Happily we started to shimoga. Got down in shimoga by 4:00am. We got another bus towards someshwara, which is our starting point of river rafting. We reached Seethanadi Nature Camp by 7:00am. From shimoga to Seethanadi Nature Camp Prashanth Bhattaru took one ticket and slept in 4 seats.
ಅಲ್ಲಿ ಮಳೆ ಬರುತ್ತಿತ್ತು, ಆ ಮಳೆಯಲ್ಲಿ ಪ್ರಕೃತಿ ಸೌಂದರ್ಯ ಸೊಗಸಾಗಿ ಕಾಣುತ್ತಿತ್ತು. ನಮ್ಮ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ River Rafting ಗೆ ಸಿದ್ದರಾದೆವು. ನಮ್ಮ ತಂಡದ ಇಬ್ಬರು ಮಂಗಳೂರಿನಿಂದ ಬರಬೇಕಿತ್ತು. ಗುರು ಕುಳಾಯಿ ಹಾಗೂ ಅರುಣ್ ಅರೆ ನಿದ್ರಾವಸ್ಥೆಯಲ್ಲಿ ಎಲ್ಲೊ ಇಳಿದು ಪುನಃ ಬರುವ ವೇಳೆಗೆ 9:೦೦ ಘಂಟೆ ಆಗಿತ್ತು. ಸೀತಾನದಿಯ ಪ್ರವಾಹ ನೋಡಿ ನಮ್ಮ ಮನಸ್ಸಿನಲ್ಲಿ ಹೆದರಿಕೆ ಉಂಟಾಯಿತು. 
It was raining, it was looking heavenly. We finished our nature calls and got ready for river rafting. 2 of our friends were suppose to come from Mangalore. Guru Kulaai and Arun in half sleep state got up some where and reached Seethanadi Nature Camp by 9:00am. When we saw the Sita river it was flooding. We were scared to see the flooding river.
Ready for Rafting


ಸೀತಾ ನದಿಯಲ್ಲಿ ಕೆಲವು ಛಾಯಚಿತ್ರ ತೆಗೆದೆವು. River Rafting ಆಯೋಜಕರು ತುಂಬಾ ಸಹಕಾರಿಯಾಗಿದ್ದರು. ನಾವು ಪೂರ್ಣ ಹಣ ಪಾವತಿ ಮಾಡಿ, ನಮ್ಮ Raft ನ್ನು ಹೊತ್ತೊಯ್ದೆವು. Rafting ನಾಯಕರು ಸಾಕಷ್ಟು ಸೂಚನೆಗಳನ್ನು ಕೊಟ್ಟರು. ನಂತರ ನಮ್ಮ River Rafting ಶುರುಮಾಡಿದೆವು.
We took some snaps in flooding river. River Rafting organizers were very co-operative. We paid complete amount for river rafting. We carried our rafts to River Sita, started River Rafting. Raft leader instructed us on how follow his instructions. We started our rafting in roaring river sita. 
ಪ್ರವಾಹದಲ್ಲಿ ಮುಳುಗಿದ ಸ್ನೇಹಿತರು.
ಪ್ರವಾಹದಿಂದ ಹರಿಯುತ್ತಿರುವ ಸೀತಾ ನದಿಯಲ್ಲಿ ಕ್ಯಾಮೆರಾ ಒಯ್ಯಲು ಯಾರೂ ಸಿದ್ಧರಿರಲಿಲ್ಲ, ನಮ್ಮ ಪ್ರೋಮೊದ್ ಧೈರ್ಯ  ಮಾಡಿ ಕ್ಯಾಮೆರಾ ತಂದಿದ್ದ.  ಆದ್ದರಿಂದ ನಮ್ಮ River Rafting ನೆನಪನ್ನು ಸೆರೆ ಹಿಡಿಯಲು ಸಾಧ್ಯ ಆಯಿತು. ಇದು ನಮ್ಮ ಮೊದಲನೇ River Rafting ಆಗಿದ್ದರಿಂದ ನಾವು ಸ್ವಲ್ಪ ಹೆದರಿದ್ದೆವು. River Rafting ಶುರು ಆಯಿತು. ಮೊಟ್ಟ ಮೊದಲಾಗಿ ನೀರಿಗೆ ಜಾರಿ ಬಿದ್ದ ಕಿರಣ್ ಬನವಾಸಿ ತಾನೊಬ್ಬನೇ ಬೀಳದೆ ತನ್ನ ರೂಮಿನ ಜೊತೆಗಾರ ಪ್ರಶಾಂತನನ್ನು ಎಳೆದು ಬೀಳಿಸಿದ. ಅವನು ಸಾಕಷ್ಟು ನೀರು ಕುಡಿದಿದ್ದನೆಂದು ನಮಗೆ ತಿಳಿಯುತ್ತಿತ್ತು.  ನಮ್ಮ Raft ನಾಯಕರು ಅವರಿಬ್ಬರನ್ನು raftina ಒಳಗೆ ಎಳೆದರು. ನಂತರ Raft ನಾಯಕರು ಎಲ್ಲರಿಗೂ ನೀರಿಗೆ ಹಾರಲು ಸೂಚಿಸಿದರು. ಖುಷಿಯಿಂದ ಎಲ್ಲರೂ ನೀರಿನಲ್ಲಿ ಮುಳುಗಿದೆವು.
In the flooding river seetha no one was ready to carry their camera except our promod. It captured the memories of seetha river rafting stills. Since this is our first river rafting experience for most of us, we were scared. Kiran Banavasi was the first person to to slip from boat. There was a rock on the way, Our raft jumped on the rock Kiran Banavasi jumped out of raft, He did not jump alone took his roommate prashanth also with. We all got scared how to get him in. Our raft leader brought both into raft. After some time our raft leader told all of us to jump in to water and get drenched. We all happily jumped in to water, 
ಅದೊಂದು ಸುಂದರವಾದ ಅನುಭವ. ನಾವು ಪ್ರವಾಹಕ್ಕೆ ವಿರುದ್ಧವಾಗಿ Raft ನಲ್ಲಿ ಹೋಗುವುದು ಅಸಾಧ್ಯವಾದರೂ ನಾವು ಪ್ರಯತ್ನಿಸಿದೆವು. ನದಿಯ ಸುತ್ತ ಸುಂದರವಾದ ದೃಶ್ಯ ಕಂಡು ಆದ ಖುಷಿಗೆ ಪಾರವೇ ಇಲ್ಲ. ಆಗ ನಾವೆಲ್ಲರೂ ನಮ್ಮ ಮೆಚ್ಚಿನ ಹಾಡು "ನಾವಾಡುವ ನುಡಿಯೇ ಕನ್ನಡ ನುಡಿಈಈಈಈಈಇ  ನಾವಿರುವ ತಾಣವೇ ಗಂಧದ ಗುಡಿ" ಹಾಡಿದೆವು.  ನಂತರ ಅನೇಕ ಬಾರಿ ನೀರಿನಲ್ಲಿ ಬಿದ್ದು ಖುಷಿ ಪಟ್ಟೆವು. ಕೊನೆಗೆ 1 :30 ರ ವೇಳೆಗೆ 15 ಕಿ ಮೀ ಕ್ರಮಿಸಿದೆವು. ಅಲ್ಲಿಂದ ಹೊರೆಟು ಹೆಬ್ರಿಯಲ್ಲಿ ತಿಂಡಿಯನ್ನು ಊಟದಂತೆ ತಿಂದೆವು.
It was very nice experience, Enjooyed it. Going against water current was very challenging. Looking at the surrounding of river we sang kannada song “Naavaaduva Nudiye Kannada Nudi”. We jumped in to water many times. When we saw surroundings of river lot of crops was in floods. We finally reached to other end of rafting by 1:30pm. This ended our rafting. We had our breakfast cum lunch in a hotel in hebri.


ನಮ್ಮ ನಂತರದ ಯೋಜನೆ ಕೂಡಲ ತೀರ್ಥಕ್ಕೆ ಹೋಗುವುದಾಗಿತ್ತು. ಅಲ್ಲಿ ಅತಿಯಾಗಿ ಮಳೆ ಬರುತ್ತಿದ್ದುದರಿಂದ ಕೂಡಲ ತೀರ್ಥವನ್ನು ತಲುಪುವುದು ಅಸಾದ್ಯವೆಂದು ಹೇಳಿದರು. ಕೂಡಲ ತೀರ್ಥ ತಲುಪಲು ಒಮ್ಮೆ  ನದಿ ದಾಟಬೇಕಾದುದರಿಂದ ಅದು ಅಸಾಧ್ಯವೆಂದು ತಿಳಿಸಿದರು. ನಮ್ಮ ಮುಂದಿನ ಯೋಜನೆಯನ್ನು ಆಗುಂಬೆಯ ಒನಕೆ ಅಬ್ಬಿಗೆ ಬದಲಾಯಿಸಿದೆವು. ಶೀಘ್ರವಾಗಿ ಆಗುಂಬೆಯನ್ನು  ತಲುಪಿ, ನಮ್ಮ ವಸ್ತುಗಳನ್ನು  ಮಲ್ಯ residency ಯಲ್ಲಿ ಇಟ್ಟು  ಒನಕೆ ಅಬ್ಬಿ ಜಲಪಾತದ ಕಡೆಗೆ ಹೊರೆಟೆವು. ಆಗುಂಬೆಯಲ್ಲಿ ಕಾಡಿನ ಒಳಗೆ ಹೋಗಬೇಕಾದರೆ ಆರಕ್ಷರಿಗೆ ತಿಳಿಸಿಯೇ ಹೋಗಬೇಕು. ಅಗುಂಬೆಯು ಮೋಡದಿಂದ ಮುಚ್ಚಿದ ಹಾಗೆ ಕಾಣುತ್ತಿತ್ತು.

ಒನಕೆ ಅಬ್ಬಿ  ಜಲಪಾತವು ಆಗುಂಬೆ ಬಸ್ ನಿಲ್ದಾಣದಿಂದ 4 ಕಿ ಮೀ  ದೂರದಲ್ಲಿದೆ. ಚಾರಣ ಶುರುವಾಗುವ ಸ್ಥಳ ಆಗುಂಬೆ ಬಸ್ ನಿಲ್ದಾಣದಿಂದ 1 ಕಿ ಮೀ ದೂರದಲ್ಲಿದೆ. ಒನಕೆ ಅಬ್ಬಿ  ಜಲಪಾತಕ್ಕೆ ಹೋಗುವ ದಾರಿ ಪೂರ್ಣವಾಗಿ ಜಿಗಣೆ (ಇಂಬಳ) ಇಂದ ತುಂಬಿದೆ. ಅತಿಯಾಗಿ ಮಳೆ ಬರುತ್ತಿದ್ದರಿಂದ ಜಿಗನೆಗೆ ದಿವ್ಯ ಔಷದವಾದ "ಹೊಗೆಸೊಪ್ಪು  ಹಾಗೂ ಹರಳೆಣ್ಣೆ" ಯಾವುದೇ ಥರದಲ್ಲಿ ಪರಿಣಾಮಕಾರಿಯಾಗಿ ಕಾಣಲಿಲ್ಲ.  ಕಿರಣ ತಾಳುರು ಜಿಗಣೆ ( ಇಂಬಳ ) ಓಡಿಸಲು ತಂದಿದ್ದ ಉಪ್ಪು ನೀರಿನ ಬಾಟಲಿ ಖಾಲಿ ಆಯಿತು ಆದರೆ ಜಿಗಣೆ ಮಾತ್ರ ಕಾಲಲ್ಲೇ ಅಂಟಿ ಕೊಂಡಿತ್ತು.

Our next plan is to go to Koodla teertha water falls. In Someshwara, some people told we can not go to Koodla Teertha because we have to cross river in that heavy rain. So we dropped our plan of going to Koodla Teertha and decided to go to Onake Abbi waterfalls in Agumbe. We started to agumbe and placed all our luggage in a room in Malya Residency. In agumbe we have to inform police before going to any place in forest. We informed and started to Onake Abbi water falls. Agumbe was completely covered with clouds.

Onake Abbi waterfalls is approximately 4km from agumbe Bus Stand. Trekking Starting point is 1km from bus stand. From Onake Abbi starting point leaches starts. Track was completely infected with leaches. We carried “Tobacco powder and Caster Oil” for leaches. This was the most effective medicine for leaches, here it did not work due to heavy rain. Due to heavy leaches we could not see Onake Abbi falls also. Kiran Talur had brought salt water to remove leaches, whole bottle went empty but all leaches were intact.
Onake Abbi waterfalls
ಒನಕೆ ಅಬ್ಬಿ ಜಲಪಾತದಲ್ಲಿ ಬಂಡೆ ಜಾರುತ್ತಿತ್ತು ಹಾಗೂ ತುಂಬಾ ಮೋಡ ಮತ್ತು ಗಾಳಿ ಇದ್ದುದರಿಂದ 10 ಜನಕ್ಕೆ ನಿಲ್ಲಲ್ಲು ಸಾಧ್ಯವಾಗಲಿಲ್ಲ. ಜಿಗಣೆಗಳು ಕೂಡ ನಮ್ಮನ್ನು ನಿಲ್ಲಲು ಬಿಡಲಿಲ್ಲ. ನಾನು ಮೊದಲಿಗನಾಗಿ ಜಲಪಾತದಿಂದ ಓಡಲು ಶುರು ಮಾಡಿದೆ. ದಾರಿಯಲ್ಲಿ ಕಾಲಿಗೆ ಹತ್ತಿದ ಜಿಗಣೆಗಳನ್ನು ತೆಗೆಯಲು ನೆಲಕ್ಕುರುಳಿದ್ದ ದೊಡ್ಡ ಮರವೊಂದರ ಮೇಲೆ ಹತ್ತಿ ತೆಗುಯುತ್ತಿದ್ದೆ. ಆಗ ನನಗೊಂದು ಅಚ್ಚರಿ ಕಾದಿತ್ತು. ನೂರಾರು ಜಿಗಣೆಗಳು ನಾನು ಹತ್ತಿದ ಮರವನ್ನೇರಿ ಬರುತ್ತಿದ್ದವು. ಆ ದೃಶ್ಯವನ್ನು ನೋಡಿ ಜಿಗಣೆ ತೆಗೆಯುವ ಯೋಜನೆ ಬಿಟ್ಟು  ವಿಶ್ರಾಂತಿ ಇಲ್ಲದೆ ಓಡತೊಡಗಿದೆ.ರಸ್ತೆ ತಲುಪಿ ಕಾಲಿಗೆ ಹತ್ತಿದ ಜಿಗಣೆ ನೋಡಿದರೆ ಅದರ ಸಂಖ್ಯೆ ಸುಮಾರು 45 ಇತ್ತು.
Near Onake Abbi falls there was not enough space to accommodate all of us, adding to that, it was highly slippery. Just saw the falls and I started to run back. Leaches made us restless. I climbed on a big fallen tree to remove leaches which have already attacked me. Leaches started climbing the tree also. In my trekking experience, this is the place leaches attacked us vigorously. I reached the main road first. I saw the number of leaches attacked me, its count was approximately 45 in my leg.
Approximately 45 Leaches attacked me alone.
ಕಿರಣ್ ಬನವಾಸಿಯು ಒನಕೆ ಅಬ್ಬಿಗೆ ಮೊದಲಿಗನಾಗಿ ಚಾರಣ ಶುರು ಮಾಡಿದ್ದ ಆದರೆ ಅಲ್ಲಿಂದ ಕೊನೆಗೆ ಬಂದವನು ಅವನೇ. ಅವನ ಕಾಲಿಗೂ ಬೆಕಾದಸ್ಟು ಜಿಗಣೆಗಳು ಹತ್ತಿ ರಕ್ತ ಕುಡಿದಿದ್ದವು. ನನ್ನ ಇಲ್ಲಿಯ ತನಕ ಮಾಡಿರುವ ಚಾರಣದಲ್ಲಿ  ಅತಿ ಹೆಚ್ಚು ಜಿಗಣೆಗಳಿಂದ ಕಚ್ಚಿಸಿಕೊಂಡು ಮಾಡಿದ ಚಾರಣ ಇದಾಗಿತ್ತು. ನಮ್ಮ ಶ್ಯಾಮ್ ಕುಳಾಯಿ ಬೇಡ ಅಂದರು ಬೂಟನ್ನು ಹಾಕಿಕೊಂಡು ಚಾರಣ ಮಾಡಲು ಬಂದಿದ್ದ. ಅದರ ಪರಿಣಾಮ ಬೂಟಿನ ತುಂಬೆಲ್ಲ ಇಂಬಳ. ನಂತರ ಬೂಟನ್ನು ಕಾಲಿಗೆ ಹಾಕುವ ಬದಲು ಕೈಯಲ್ಲಿ ಹಿಡಿದು ನಡೆದ.
Kiran Banavasi was first to start trekking to falls, and he was the last to come to main road. All of us were bit by almost all leaches in the forest. They enjooyed the feast. Our Sham's (Laadu)  even after advice came with shoe for trekking, which resulted in to boot full of leaches. Instead of putting to leg he walked with his shoe in hand.
ಬೇತಾಳ brothers

ರಸ್ತೆಗೆ ಬಂದು ನಿಂತಾಗ ಒಂದು ವಿಚಿತ್ರವನ್ನು ಗಮನಿಸಿದೆವು. ಅಲ್ಲಿ ಕೆಲವು ಕೋತಿಗಳು ರಸ್ತೆ ಬದಿಯಲ್ಲಿ ಕುಳಿತಿದ್ದವು, ಒಂದು ಕೋತಿ ಮಾತ್ರ ರಸ್ತೆ ಮಧ್ಯೆ ಕುಳಿತಿತ್ತು, ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಅಡ್ಡವಾಗಿ ಕುಳಿತಿತ್ತು. ನಾವು ನೋಡುತ್ತಿದ್ದಂತೆಯೇ ಕಾರಿನವ ಕಾರನ್ನು ನಿಲ್ಲಿಸಿ ಕೋತಿಯನ್ನು ಓಡಿಸಲು ನೋಡುವಸ್ಟರಲ್ಲಿ ಕೋತಿಯು ಚಂಗನೆ ಒಂದು ಕಿಟಿಕಿಯಿಂದ ಕಾರಿನೊಳಗೆ ಹಾರಿ ಅವರಲ್ಲಿದ್ದ ತಿನಿಸುಗಳನ್ನು ಹೊತ್ತು ಮತ್ತೊಂದು ಕಿಟಿಕಿಯಿಂದ ಹೊರಗೆ ಹಾರಿತು. ಈ ಕೋತಿಗಳು ನಾವು ನೋಡುತ್ತಿದ್ದಂತೆಯೇ 3 ಕಾರುಗಳನ್ನು ನಿಲ್ಲಿಸಿ ತಿನಿಸುಗಳನ್ನು ಹೊತ್ತೊಯ್ದವು. ಅವು ಬಹಳ ಬುದ್ದಿವಂತ ಕೊತಿಯೇ ಆಗಿದ್ದವು. ಅದನ್ನು ನೋಡುವುದು ನಮಗೊಂದು ಖುಷಿಯೇ ಆಗಿತ್ತು
We observed one strange thing here. In that heavy rain few monkeys were sitting in the main road. One of those monkeys was sitting in the center of the road. One car came and stopped in front of it thinking monkey may die. Immediately monkey jumped into the car from a window and picked what are all eatables possible and jumped out from another window. These monkeys did like this for 3 cars. They were very intelligent monkeys.

ಎಲ್ಲರೂ ಒನಕೆ ಅಬ್ಬಿ ಜಲಪಾತದಿಂದ ಹೊರಬಂದ ತಕ್ಷಣ ಮಲ್ಯ residency ಕಡೆಗೆ ಹೊರಟೆವು. ರಾತ್ರಿ  ಒಂದು ಹೋಟೆಲಿನಲ್ಲಿ ಊಟ ಮುಗಿಸಿ, ಯಥಾ ಪ್ರಕಾರ bluff ಆಟ ಆಡಿದೆವು. ಈ ಆಟ ನಮಗೆ ಒಳ್ಳೆ ಮಜಾ ಕೊಟ್ಟಿತು. ನಂತರ 10 :30 ರಾತ್ರಿ   ನಾವೆಲ್ಲರೂ ಒಂದೇ ದೊಡ್ಡ ರೂಮಿನಲ್ಲಿ ಮಲಗಿದೆವು. ನಾನು ಬೆಳಗ್ಗೆ 5 :೦೦ ಕ್ಕೆ ಎದ್ದು ಕುಂದಾದ್ರಿ ಚಾರಣಕ್ಕೆ ಸಿದ್ಧನಾದೆ. ಉಳಿದೆಲ್ಲ ಸ್ನೇಹಿತರು ಸಿದ್ಧರಾದರು.
Finally all of us came out and started to Malya Residency. We had our dinner in a hotel. As usual in the night played bluff game. It was nice game. We went sleep at around 10:30pm. I got up early in the morning 5:00am. We were suppose to start trekking to Kundadri. Kundaadri trekking starts from Kundaadri village. We hired an auto from Guddekeri to Kundaadri gate. Kundaadri peak is 4 km (One way) from Kundaadri gate.

ಸುಮಾರು ಬೆಳಗ್ಗೆ 8:15 ಘಂಟೆಗೆ ಆಗುಂಬೆ ಇಂದ  ಹೊರಟು  ನಾವು ಗುಡ್ದೆಕೆರಿ ತಲುಪಿದೆವು, ಕುಂದಾದ್ರಿ ಹೆಬ್ಬಾಗಿಲಿಗೆ(Gate ) ಅಲ್ಲಿಂದ ಒಂದು ಆಟೋ ಹಿಡಿದು 5 ಕಿ ಮೀ ಹೋಗಬೇಕು. ಅಲ್ಲಿಂದ ನಮ್ಮ ಚಾರಣ ಶುರುವಾಯಿತು. ಮಳೆಯಲ್ಲೇ ಸ್ವಲ್ಪ ದೂರ ಕ್ರಮಿಸಿದೆವು. ಕುಂದಾದ್ರಿಯು, ಕುಂದಾದ್ರಿ ಹೆಬ್ಬಾಗಿಲಿನಿಂದ 4 ಕಿ ಮೀ ಇದೆ. ಸ್ನೇಹಿತರ ನಗೆಹನಿಗಳು, ಮಳೆಹನಿಯಲ್ಲಿ ತುಂಬಾ ಸೊಗಸಾಗಿ ಕೇಳುತ್ತಿದ್ದವು. ಸುಮಾರು 12:15 ರ ವೇಳೆಗೆ ತುದಿಯನ್ನು ತಲುಪಿದೆವು. ಚಾರಣ ಮಾಡಲು ಎರಡು ದಾರಿಗಳು ಇವೆ. ಒಂದು ರಸ್ತೆಯ ಮೇಲೆ ಮತ್ತೊಂದು ಬಂಡೆಯಮೇಲೆ ನಡೆದು ಹೋಗುವುದು. ಮಳೆ ಹೆಚ್ಹಾಗಿದ್ದುದರಿಂದ ಸ್ಥಳಿಕರು ಬಂಡೆಯ ಮೇಲೆ ಹೋಗುವ  ದಾರಿಯಲ್ಲಿ ಹೋಗುವುದು ತುಂಬಾ ಕಷ್ಟ ಎಂದು ಹೇಳಿದಾಗ ನಾವು ರಸ್ತೆಯಲ್ಲೇ ನಡೆದು ಹೋಗಲು ನಿರ್ಧರಿಸಿದೆವು.
we hired a auto till kundadri trekking point. Kundaadri peak could be reached by road. There is a trekking route which goes on steep rock. Since it was raining heavily localites suggested not to venture on slippery rock. We walked on road itself. We started our trekking in heavy downpour. There were no leaches on the way because we were walking on road.
ಕುಂದಾದ್ರಿ ಹೆಬ್ಬಾಗಿಲು. (Kundaadru Gate)


Trekking was approximately 4km one way(8km totally). Since it was in road we walked without strain. On the peak of Kundaadri scenary was beautiful



ದಿನವೆಲ್ಲ ಮಳೆಯಲ್ಲಿ ಸ್ನಾನ ಮಾಡುವ ಮೈಯೆಲ್ಲಾ ಪಾಚಿ.
ತುತ್ತ ತುದಿಯಲ್ಲಿ ಮೋಡದಲ್ಲಿ ಮುಳುಗಿದ್ದೆವು. ಈ ಮೋಡದಲ್ಲಿ 10 ಮೀಟರ್ ದೂರದಲ್ಲಿ ನಿಂತರೂ ಕಾಣುವುದು ಅಸಾಧ್ಯವಾಗಿರುವಾಗ 50 ಮೀಟರ್ ದೂರದಲ್ಲಿ ನಿಂತ  ನಮ್ಮ ಅರವಿಂದ ಹಾಗು ಹರಿ ಕುಳಾಯಿ ತಮ್ಮ ಛಾಯಾ ಚಿತ್ರವನ್ನು ತೆಗೆಸೆಕೊಳ್ಳುವ ತವಕದಲ್ಲಿದ್ದರು. ಇದೆ ಜೋಡಿಯು ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದ ಭಟ್ಟರು ಹೇಳಿದ ಸ್ಥಳ ಪುರಾಣವನ್ನು ಕಿವಿ ಮುಚ್ಚಿ ಕೇಳಿ ಬೇಗನೆ ಆಚೆ ಬಂದರು. ದಾರಿಯಲ್ಲಿ ಸಿಕ್ಕ ಮುಳ್ಳು ಹಂದಿ ಮುಳ್ಳನ್ನು ಹಿಡಿದು ಎಂದೂ ಕಂಡಿಲ್ಲದವರಂತೆ ಎಲ್ಲರೂ ಛಾಯಾಚಿತ್ರ ತೆಗಿಸಿಕೊಂಡರು.  ಅಲ್ಲಿದ್ದ ಜೈನ ಮಂದಿರ ನೋಡಿ, ಮಧ್ಯಾನ್ಹ ಚಪಾತಿ ಚಟ್ನಿಪುಡಿ ಹಾಗೂ ಉಪ್ಪಿನಕಾಯನ್ನು ತಿಂದು, ನಮ್ಮ ಬಳಿ ನೀರಿಲ್ಲದ ಕಾರಣ, ಮಳೆ ಸುರಿಯುತ್ತಿದ್ದ  ಮಳೆಯಲ್ಲೇ ಕೈ ತೊಳೆದು ನೀರು ಕುಡಿದು  ಹೊರಟೆವು. ನಾವು ದೇವಸ್ಥಾನದ ಭಟ್ಟರನ್ನು ಕಾಡಿನ ದಾರಿ ತೋರಿಸಲು ಕೇಳಿದಾಗ, ಅವರು ತೋರಿಸಿದ ದಾರಿ ಆ ಮಳೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸರಿಯಾದ ದಾರಿ ಎನ್ನಿಸುತ್ತಿತ್ತು.
On top of Kundaadri we were in clouds. It was difficult ot see the people in 10 mtr, but our Aravinda and Hari Kulaai wanted a photo of them standing 50 mtr away. This same people went inside temple and heard the importance of that temply by closing their ears and came outside. on the way to kundaadri we found a thorn of porcupine, we took photos with it as though we have never seen it before. Saw Jain temple and had chapathi, chatnipudi and pickle then since we did not have water, washed our hand in rain and drunk rain water started back. We asked prest of the temple to show the forest way to reach down, In that rain road he shown was looking like way to suicide.

ಜೈನರ ದೇವಸ್ಥಾನ. (Jain Temple)

ಒಂಟಿ ಕಾಲಿನಲ್ಲಿ ನಿಂತು ಏನೋ ತಪಸ್ಸು ಮಾಡುತ್ತಿರುವ ಕುಕ್ಕುಟ. 
ಮಧ್ಯಾನ್ಹ 2 :15 ರ ವೇಳೆಗೆ ಕುಂದಾದ್ರಿ ಹೆಬ್ಬಾಗಿಲನ್ನು  ತಲುಪಿದೆವು. ಒಂದು ವಿಚಿತ್ರವಾದ ಹುಳ ನಮ್ಮ ಕಣ್ಣಿಗೆ ಬಿತ್ತು. ಅದರ ತಲೆ ಅರ್ಧ ಚಂದ್ರನ  ಆಕಾರದಲ್ಲಿ ಇತ್ತು, ಅದರ ಮನಸೆಳೆಯುವ ಬಣ್ಣ, ಪ್ರಕೃತಿ ಸೃಷ್ಟಿ ನಿಜಕ್ಕೂ ಅದ್ಬುತ
Reached Kundaadri gate by 2:15pm. We observed a Vague kind of worm its head was in axe or half moon shape. Its attractive color, nature creation is uncomparable.

ನಂತರ ಒಂದು ಆಟೋ ಹತ್ತಿ ಗುಡ್ದೆಕೆರಿ'ಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ಆಗುಂಬೆ ತಲುಪಿದೆವು. ನಂತರ ರಾತ್ರಿ ಊಟ ಮುಗಿಸಿ ರಾತ್ರಿ 8 :30 ಕ್ಕೆ ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ತಲುಪಿದೆವು.
Next we reached Guddekeri by an auto and reached agumbe by bus. Had dinner in a hotel and started to bangalore by Rajahamsa bus.